Header Ads

Seo Services
ಬೆಂಗಳೂರು: ದಿನ ನಿತ್ಯದ ಜಂಜಾಟದಲ್ಲಿ ಹಲವು ವಿಷಯಗಳ ಬಗ್ಗೆ ನಾವು ತಲೆ ಓಡಿಸಬೇಕು.  ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಮನೆಯಲ್ಲಿ ಶಾಂತ ಮೂರ್ತಿಯಾಗಿರಬೇಕು. ನಗು ನಗುತ್ತಾ ಇರಬೇಕು. ಇದೆಲ್ಲದಕ್ಕೂ ಒಂದೇ ಪರಿಹಾರ. ಅದೇನದು?

ದೈಹಿಕ ವ್ಯಾಯಾಮ. ಪ್ರತೀ ದಿನ ದೈಹಿಕ ವ್ಯಾಯಾಮ ಮಾಡುತ್ತಿದ್ದರೆ ಎಲ್ಲಾ ಉಲ್ಲಾಸ ಮೂಡಿ ಬುದ್ಧಿಯೂ ಚುರುಕಾಗಿ ಕೆಲಸ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ವ್ಯಾಯಾಮವೆಂದರೆ ಪದ್ಮಾಸನ  ಹಾಕಿ ಕುಳಿತು ಕೈ ಕಾಲು ಮೇಲಕ್ಕೆತ್ತಿ ಸರ್ಕಸ್ ಮಾಡಬೇಕೆಂದೇನಿಲ್ಲ.
ಪ್ರತೀ ದಿನ ಸ್ವಲ್ಪ ಹೊತ್ತು ನಡೆದಾಡುವುದು, ಜಾಗಿಂಗ್ ಮಾಡುವುದು, ಈಜುವುದು, ನೃತ್ಯ ಮಾಡುವುದು ಮಾಡುತ್ತಿದ್ದರೆ ಸಾಕು. ಬುದ್ಧಿಯೂ ಚುರುಕಾಗಿ ಕೆಲಸ ಮಾಡುತ್ತದೆ ಮತ್ತು ಸ್ಮರಣ ಶಕ್ತಿಯೂ ಹೆಚ್ಚುತ್ತದೆ ಎಂದು ಅಮೆರಿಕಾದ ಸಂಶೋಧಕರು ಕಂಡುಕೊಂಡಿದ್ದಾರೆ.
ಇನ್ನು ವಯಸ್ಸಾದವರಲ್ಲಿ ದೈಹಿಕ ವ್ಯಾಯಾಮದಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಮೆದುಳಿನಲ್ಲಿರುವ ಕಾರ್ಯ ನಿರ್ವಾಹಕ ಅಂಗಕ್ಕೆ ದೈಹಿಕ ವ್ಯಾಯಾಮದಿಂದ ಚುರುಕು ಮುಟ್ಟುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.

No comments:

Powered by Blogger.