Header Ads

Seo Services

'ನಟಸಾರ್ವಭೌಮ' ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾದ ‘ಪವರ್​ ಸ್ಟಾರ್​’ ಪುನೀತ್! ಏನಿದು ಅಚ್ಚರಿಯ ಸುದ್ದಿ? ಇನ್ನು ನೋಡಿಲ್ವಾ..

ಸದ್ಯ ಸಿನಿಮಾ ಪೋಸ್ಟರ್​ ಬಿಟ್ಟು ಚಿತ್ರದ ಬಗ್ಗೆ ಯಾವುದೇ ಗುಟ್ಟನ್ನು ತಂಡ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಚಿತ್ರದ ಟೀಸರ್​ ಅಥವಾ ಸಿನಿಮಾ ರಿಲೀಸ್​ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಉತ್ತರ ಕಂಡುಕೊಳ್ಳಲು ಸಂಜೆಯವರೆಗೆ ಕಾಯಲೇಬೇಕು.

ಪುನೀತ್​ ರಾಜ್​ಕುಮಾರ್​ ನಟನೆಯ ‘ನಟಸಾರ್ವಭೌಮ’ ಚಿತ್ರತಂಡ ಮಂಗಳವಾರವಷ್ಟೇ ಕುಂಬಳಕಾಯಿ ಒಡೆಯುವ ಮೂಲಕ, ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ ಎಂಬುದನ್ನು ಅಧಿಕೃತಗೊಳಿಸಿತ್ತು. ಇದಾದ ಮರುದಿನವೇ ಚಿತ್ರತಂಡ ಸರ್​ಪ್ರೈಸ್​ ನೀಡಲು ಮುಂದಾಗಿದೆ. ಅಚ್ಚರಿಯ ಸುದ್ದಿ ನೀಡುವ ವಿಚಾರವನ್ನು ಪುನೀತ್​ ರಾಜ್​ಕುಮಾರ್​ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡಿದ್ದಾರೆ.

ಇಂದು ಸಂಜೆ 6.30ಕ್ಕೆ ‘ನಟಸಾರ್ವಭೌಮ’ ತಂಡ ಅಚ್ಚರಿಯ ವಿಚಾರ ಏನು ಎಂಬುದನ್ನು ಸೋಷಿಯಲ್​ ಮೀಡಿಯಾದಲ್ಲಿ ಹೇಳಲಿದೆಯಂತೆ. ಸಿನಿಮಾ ಶೂಟಿಂಗ್​ ಪೂರ್ಣಗೊಂಡ ಬೆನ್ನಲ್ಲೇ ಈ ಘೋಷಣೆ ಆಗಿರುವುದು ಅವರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ‘ನಟಸಾರ್ವಭೌಮ’ ಚಿತ್ರದ ಸರ್​ಪ್ರೈಸ್​ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಈಗಾಗಲೇ ಪುನೀತ್​ ಡಬ್ಬಿಂಗ್​ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಸಿನಿಮಾ ಪೋಸ್ಟರ್​ ಬಿಟ್ಟು ಚಿತ್ರದ ಬಗ್ಗೆ ಯಾವುದೇ ಗುಟ್ಟನ್ನು ತಂಡ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಚಿತ್ರದ ಟೀಸರ್​ ಅಥವಾ ಸಿನಿಮಾ ರಿಲೀಸ್​ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಉತ್ತರ ಕಂಡುಕೊಳ್ಳಲು ಸಂಜೆಯವರೆಗೆ ಕಾಯಲೇಬೇಕು.

‘ನಟಸಾರ್ವಭೌಮ’ ಚಿತ್ರಕ್ಕೆ ಪವನ್​ ಒಡೆಯರ್​ ನಿರ್ದೇಶನವಿದೆ. ಪುನೀತ್​ಗೆ ಜತೆಯಾಗಿ ರಚಿತಾ ರಾಮ್​ ಹಾಗೂ ಅನುಪಮಾ ಪರಮೇಶ್ವರನ್​ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು.

No comments:

Powered by Blogger.