Header Ads

Seo Services

ಮದುವೆ ಸುದ್ದಿಯನ್ನು ಖಚಿತ ಪಡಿಸಿದ ಐಂದ್ರಿತಾ-ದಿಗಂತ್​..!!!!!

ಚಂದನವನದ ಮುದ್ದಾದ ಜೋಡಿ ಎಂದರೆ ಅದು ಐಂದ್ರಿತಾ-ದಗಂತ್​ ಅವರದ್ದು.  ಈ ಜೋಡಿ ಹಕ್ಕಿ ಯಾವಾಗ ಹಸೆಮಣೆ ಏರಲಿದ್ದಾರೆ ಎಂದು ಕನ್ನಡಿಗರು ಕಾಯುತ್ತಿದ್ದರು. ಅಂತೂ ಇಂತೂ ಈ ಪ್ರಣಯದ ಹಕ್ಕಿಗಳು ಸಂಸಾರದ ಜೋಕಾಲಿಯಲ್ಲಿ ಜೀಕೋಕೆ ಸಿದ್ದ  ಅಂತಿದ್ದಾರೆ.
ಡಿಸೆಂಬರ್ ತಿಂಗಳು ಚಂದನವನಕ್ಕೆ ಲಕ್ಕಿ ಎನ್ನಬಹುದು. ಹೌದು ಅದಕ್ಕೆ ಡಿಸೆಂಬರ್​ನಲ್ಲಿ ಚಂದನವನದಲ್ಲಿ ಸಾಕಷ್ಟು ಸಂಭ್ರಮಗಳ ಸಂತೆಯೇ ನಡೆಯಲಿದೆ. ಅಲ್ಲಿ ಇನ್ನೇನಿದ್ದರೂ ಖುಷಿಯ ವ್ಯಾಪಾರ ಅಷ್ಟೆ. ಹಬ್ಬದ ಸಂಸಾರ ಶುರುವಾಗೋದಷ್ಟೇ ಬಾಕಿ. ಒಂದು ಕಡೆ ಯಶ್-ರಾಧಿಕಾ ಮುದ್ದಿನ ಕಂದ ಭೂಮಿಗೆ ಬರುವ ಸಂಭ್ರಮವಾದರೆ, ಧ್ರುವ ಸರ್ಜಾ ನಿಶ್ಚಿತಾರ್ಥಕಕ್ಕೂ ದಿನಾಂಕ ನಿಗದಿಯಾಗಿದೆ. ಈಗ ದಿಗಂತ್-ಆ್ಯಂಡಿ ಮದುವೆ ಡಿಸೆಂಬರ್ 11 ಮತ್ತು 12ಕ್ಕೆ ಅನ್ನೋ ಸುದ್ದಿಯನ್ನು ಅಧಿಕೃತವಾಗಿ ಐಂದ್ರಿತಾ ಖಚಿತಪಡಿಸಿದ್ದಾರೆ.
ದಿಗಂತ್-ಐಂದ್ರಿತಾ ಜೋಡಿಯ ಪ್ರೀತಿ ಒಂದೆರಡು ವರ್ಷಗಳದ್ದಲ್ಲ... 'ಮನಸಾರೆ' ಸಿನಿಮಾದಿಂದ ಮನಸಾರೆ ಪ್ರೀತಿಸೋಕೆ ಶುರುಮಾಡಿದ ಈ ಕ್ಯೂಟ್ ಕಪಲ್​ ಸದ್ಯ ಪ್ರೇಮಬಂಧನವನ್ನು ಸಂಸಾರ ಸಾಗರದಲ್ಲಿ ಇಳಿಸಿ ಈಜಾಡೊಕೆ ತಯಾರಾಗಿದೆ. 2009ರಲ್ಲಿ ಶುರುವಾದ ಜಂಟಿಯಾದ ಬಂಧನವನ್ನು ಒಂಬತ್ತು ವರ್ಷಗಳ ನಂತರ ಮೂರು ಗಂಟಿನ ಮೂಲಕ ಶಾಶ್ವತವಾಗಿಸುತ್ತಿದೆ.

ಬೆಂಗಾಲಿ ಬೆಡಗಿಗೆ ಮಲೆನಾಡ ಹುಡುಗ ದಿಗಂತ್ ಪರಿಚಯವಾದ ಸಿನಿಮಾನೇ ರೊಮ್ಯಾಂಟಿಕ್ ಸಿನಿಮಾ. ವಿಕಟಕವಿ ಯೋಗರಾಜ ಭಟ್ಟರು 'ಮುಂಗಾರು ಮಳೆ' ಮತ್ತು 'ಗಾಳಿಪಟ'ದಲ್ಲಿ ಮೋಸ್ಟ್ ಹ್ಯಾಂಡ್‍ಸಮ್ ಮತ್ತು ರೊಮ್ಯಾಂಟಿಕ್ ಆಗಿದ್ದ ದಿಗಂತ್‍ಗೆ ಜೊಡಿಯಾಗಿ ಅಷ್ಟೇ ಲವ್ಲೀಯಾಗಿದ್ದ ಸುಂದರಿಯನ್ನು ಆಯ್ದುಕೊಂಡಿದ್ದರು. ಮೊದಲ ಬಾರಿಗೆ ಈ ಜೋಡಿ ತೆರೆ ಮೇಲೆ ಬಂದಾಗಲೇ ಹಾಲು ಜೇನು ಬೆರೆತ ಹಾಗಿದೆಯಲ್ಲ ಅಂತ ಉದ್ಘಾರ ತೆಗೆದಿದ್ದರು ಚಿತ್ರಪ್ರೇಮಿಗಳು.

ಇಲ್ಲಿಯವರೆಗೆ ಕೇವಲ ಗಾಳಿ ಮಾತಾಗಿದ್ದ ಆ್ಯಂಡಿ-ದಿಗಿ ಮದುವೆ ವಿಷಯ ಈಗ ಅಧಿಕೃತವಾಗಿದೆ. ಇದನ್ನು ಐಂದ್ರಿತಾ ಹಾಗೂ ದಿಗಂತ್​ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

No comments:

Powered by Blogger.