Header Ads

Seo Services

ಪ್ರಯೋಗಾತ್ಮಕ ಸಿನಿಮಾಗಳ ಬೆನ್ನು ತಟ್ಟುವ ಕಾಯಕದಲ್ಲಿ ಬ್ಯುಸಿಯಾದ್ರು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್...

ಪರಭಾಷೆಗಳಿಗೆ ಹೋಲಿಸಿದರೆ ನಮ್ಮ ಭಾಷೆಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಕಡಿಮೆ. ಆದರೆ ಈಗ ಹೊಸ ಪ್ರತಿಭೆಗಳು ಈ ರೀತಿ ಸಿನಿಮಾಗಳನ್ನು ಮಾಡುತ್ತಿದ್ದಾರೆ - ದರ್ಶನ್​

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಸಿನಿಮಾಗಳು ಸಾಕಷ್ಟು ತೆರೆಕಾಣುತ್ತಿವೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇಂಥ ತಂಡಗಳ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಹೊಸಬರ ಸಿನಿಮಾಗಳ ಆಡಿಯೋ ಲಾಂಚ್​, ಟ್ರೇಲರ್​ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತೆರಳಿ, ಶಹಭಾಶ್​ ನೀಡಿ ಬರುತ್ತಾರೆ. ಈಗ ‘ಅನುಕ್ತ’ ಚಿತ್ರದ ಆಡಿಯೋ ಲಾಂಚ್​ನಲ್ಲಿ ದರ್ಶನ್​ ಪಾಲ್ಗೊಂಡಿದ್ದರು. ಈ ವೇಳೆ ಟ್ರೆಂಡ್​ ಸೆಟ್ಟಿಂಗ್​ ಸಿನಿಮಾಗಳು ಕನ್ನಡದಲ್ಲಿ ತೆರೆಕಾಣುತ್ತಿವೆ ಎಂದು ಖುಷಿಪಟ್ಟರು.

ಕನ್ನಡದವರು ಎಲ್ಲ ಭಾಷೆಗಳ ಸಿನಿಮಾಗಳನ್ನೂ ನೋಡುತ್ತಾರೆ ಎಂದಿರುವ ಅವರು, ‘ಓರ್ವ ಸಾಮಾನ್ಯ ಕನ್ನಡ ಪ್ರೇಕ್ಷಕ ಪ್ರಯೋಗಾತ್ಮ ಸಿನಿಮಾ ನೋಡಬೇಕು ಎಂದರೆ ತಮಿಳು ಸಿನಿಮಾ ನೋಡುತ್ತಾನೆ. ಆ್ಯಕ್ಷನ್​ ಸಿನಿಮಾ ನೋಡಬೇಕು ಎಂದರೆ ತೆಲುಗು ಚಿತ್ರವನ್ನು, ಹೊರದೇಶಗಳ ಲೊಕೇಷನ್​  ಕಣ್ತುಂಬಿಕೊಳ್ಳಲು ಬಾಲಿವುಡ್​ ಸಿನಿಮಾ ನೋಡುತ್ತಾನೆ. ನೋಡಬೇಕಲ್ಲ ಎಂದು ಕನ್ನಡ ಸಿನಿಮಾ ನೋಡುತ್ತಾನೆ. ಇದು ನಮ್ಮ ಸ್ಥಿತಿ. ನಾವು ನಮ್ಮ ಭಾಷೆಯನ್ನು ಅವರಿಗೆ ಕಲಿಸುವುದಿಲ್ಲ. ಅವರ ಭಾಷೆಯಲ್ಲೇ ಮಾತನಾಡಿಬಿಡುತ್ತೇವೆ’  ಎಂದು ಬೇಸರ ವ್ಯಕ್ತಪಡಿಸಿದರು.
ಈ ಟ್ರೆಂಡ್​ ಈಗ ಬದಲಾಗುತ್ತಿದೆ ಎಂದಿರುವ ದರ್ಶನ್​, ‘ಪರಭಾಷೆಗಳಿಗೆ ಹೋಲಿಸಿದರೆ ನಮ್ಮ ಭಾಷೆಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಕಡಿಮೆ. ಆದರೆ ಈಗ ಹೊಸ ಪ್ರತಿಭೆಗಳು ಈ ರೀತಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಪ್ಲಸ್​​ ಪಾಯಿಂಟ್​ ಆಗಲಿದೆ. ಈ ರೀತಿ ಸಿನಿಮಾಗಳು ಮತ್ತಷ್ಟು ತೆರೆಕಾಣುವಂತಾಗಲಿ’ ಎಂದು ಹಾರೈಸಿದರು.

No comments:

Powered by Blogger.