Header Ads

Seo Services

ಯಾರ್ರೀ ಅದು 'ಪೈಲ್ವಾನ್' ಫೋಟೋ ನಕಲಿ ಎಂದಿದ್ದು? ಸಾಕ್ಷಿ ಸಮೇತ ಹಾಜರಾದ್ರು ಅಭಿಮಾನಿಗಳು! ಶಾಕಿಂಗ್ ನ್ಯೂಸ್

ಸುದೀಪ್​ ಮೊದಲು ಹೇಗಿದ್ದರು. ಈ ಚಿತ್ರಕ್ಕಾ​ಗಾಗಿ ಹೇಗೆ ಸಿದ್ಧಗೊಂಡರು ಎಂಬುದನ್ನು ಫೋಟೋ ಸಮೇತ ಹಾಕಿದ್ದಾರೆ. ಮೊದಲ ಫೋಟೋದಲ್ಲಿ ಸುದೀಪ್​ಗೆ ಕೊಂಚ ಹೊಟ್ಟೆ ಇತ್ತು. ನಂತರ ವರ್ಕ್​​ಔಟ್​ ಮಾಡಿ ಆ ಹೊಟ್ಟೆ ಕರಗಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಒಂದೇ ವಿಚಾರ. ಅದು ‘ಪೈಲ್ವಾನ್​’ ಸಿನಿಮಾದ ಹೊಸ​​ ಪೋಸ್ಟರ್​ ಬಗ್ಗೆ. ಇಲ್ಲಿ ‘ಕಿಚ್ಚ’ ಸುದೀಪ್​ ಲುಕ್​ ನೋಡಿ ಬೆರಗಾದವರಿಗಿಂತ, ‘ಇದು ನಕಲಿ ಫೋಟೋ’ ಎಂದವರೇ ಹೆಚ್ಚು. ಈ ವಿಚಾರ ಕಿಚ್ಚ ಅಭಿಮಾನಿಗಳ ಕೋಪವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ ‘ಪೈಲ್ವಾನ್​’ ಪೋಸ್ಟರ್​ ನಕಲಿ ಅಲ್ಲ ಎಂಬುದಕ್ಕೆ ಅವರು ಸಾಕ್ಷಿಯನ್ನೂ ನೀಡಿದ್ದಾರೆ.
‘ಪೈಲ್ವಾನ್​’ ಪೋಸ್ಟರ್​ ರಿಲೀಸ್​ ಆದ ಬೆನ್ನಲ್ಲೇ ಕಿಚ್ಚನ ಲುಕ್​ ನೋಡಿದವರು ‘ಇದು ಫೋಟೋಶಾಪ್​ ಮಾಡಿದ ಚಿತ್ರ. ಯಾರದ್ದೋ ದೇಹಕ್ಕೆ ಕಿಚ್ಚನ ಮುಖ ಅಂಟಿಸಲಾಗಿದೆ’ ಎಂದಿದ್ದರು. ಹಾಗಾಗಿ ಸುದೀಪ್​ ಮೊದಲು ಹೇಗಿದ್ದರು. ಈ ಚಿತ್ರಕ್ಕಾ​ಗಾಗಿ ಹೇಗೆ ಸಿದ್ಧಗೊಂಡರು ಎಂಬುದನ್ನು ಫೋಟೋ ಸಮೇತ ಹಾಕಿದ್ದಾರೆ. ಮೊದಲ ಫೋಟೋದಲ್ಲಿ ಸುದೀಪ್​ಗೆ ಕೊಂಚ ಹೊಟ್ಟೆ ಇತ್ತು. ನಂತರ ವರ್ಕ್​​ಔಟ್​ ಮಾಡಿ ಆ ಹೊಟ್ಟೆ ಕರಗಿಸಿದ್ದಾರೆ ಎಂಬುದು ಈ ಫೋಟೋ ಮೂಲಕ ಸಾಬೀತಾಗಿದೆ.
ಚಿತ್ರದ ಪೋಸ್ಟರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿರುವುದಕ್ಕೆ ಸುದೀಪ್​ ಸಖತ್​ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ ಟೀಸರ್​ ರಿಲೀಸ್ ಮೂಲಕ ನಿಮ್ಮ ಎದುರು ಬರಲಿದ್ದೇನೆ ಎಂದಿದ್ದಾರೆ. ಕಿಚ್ಚನ ಹೊಗಳುವ ಭರದಲ್ಲಿ ಅನೇಕರು ಬೇರೆ ನಟರನ್ನು ತೆಗಳಿದ್ದಾರಂತೆ! ಇದಕ್ಕೆ ಕಿಚ್ಚ ಬೇಸರಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್​, ‘ಪೈಲ್ವಾನ್​ ಟ್ರೆಂಡಿಗ್​ ಬಗ್ಗೆ ಅನೇಕರು ಬರೆದುಕೊಂಡಿದ್ದಾರೆ. ಇದು ಖುಷಿಯ ವಿಚಾರ. ಆದರೆ ಕೆಲವರು ಬೇರೆಯವರನ್ನು ಅವಮಾನಿಸಿ ಟ್ವೀಟ್​  ಮಾಡುತ್ತಿದ್ದಾರೆ. ಹಾಗೆ ಮಾಡಿದರೆ ನೀವು ನನ್ನ ಸಿನಿಮಾವನ್ನು ಬೆಂಬಲಿಸಿದಂತಾಗುವುದಿಲ್ಲ. ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಅದಕ್ಕೆ ನಾವು ಖುಷಿಪಡಬೇಕು. ಬೇರೆಯವರನ್ನು ಅವಮಾನಿಸಿದರೆ ಅದು ನನ್ನನ್ನು ಅವಮಾನಿಸಿದಂತೆ’ ಎಂದಿದ್ದಾರೆ. ಈ ಮೊದಲು ಕೂಡ ಕಿಚ್ಚ ಅಭಿಮಾನಿಗಳಲ್ಲಿ ಇದೇ ರೀತಿ ಮನವಿ ಮಾಡಿದ್ದರು.

No comments:

Powered by Blogger.