Header Ads

Seo Services

ಸುದೀಪ್ ಹಾದಿಯಲ್ಲಿ ರಕ್ಷಿತ್ ಶೆಟ್ಟಿ ಹೆಜ್ಜೆ: ದಾಖಲೆ ಮಾಡ್ತಾರಾ 'ರಿಕ್ಕಿ'.?

ಸದ್ಯದ ಮಟ್ಟಿಗೆ ಕನ್ನಡದ ಅತಿ ದೊಡ್ಡ ಬಜೆಟ್ ಸಿನಿಮಾ ಯಾವುದು ಅಂದ್ರೆ ನಿಖರವಾದ ಮಾಹಿತಿ ಇಲ್ಲ. ಇದು ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ ಹೊರತು ಎಷ್ಟು ಬಜೆಟ್ ಎಂದು ಹೇಳುವುದಿಲ್ಲ. ಈಗ ಕೆಜಿಎಫ್ ವಿಚಾರದಲ್ಲೂ ಅದೇ ಆಗಿದೆ. ಇಲ್ಲಿಯವರೆಗೂ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ಹೊಸ ದಾಖಲೆ ಎನ್ನಲಾಗುತ್ತಿದೆ. ಅತಿ ಹೆಚ್ಚು ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಬಟ್, ಬಜೆಟ್ ಎಷ್ಟು ಅಂದ್ರೆ, 'ನಾನು ಬೆಲೆಗೆ ಸಂಬಂಧ ಕಟ್ಟಲ್ಲ, ಸಂಬಂಧಕ್ಕೆ ಬೆಲೆ ಕಟ್ತೀನಿ' ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ,ಕನ್ನಡದಲ್ಲಿ ನೂರು ಕೋಟಿ ಬಜೆಟ್ ಸಿನಿಮಾ ಯಾವಾಗ ಬರುತ್ತೆ ಎಂದು ಕೇಳಿದ್ರೆ, ಸದ್ಯಕ್ಕೆ ಉತ್ತರ ಕಿಚ್ಚ ಸುದೀಪ್. ಹೌದು, ಸುದೀಪ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬರಲಿರುವ 'ಮದಕರಿ ನಾಯಕ'ನ ಬಯೋಪಿಕ್ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾಗಲಿದೆಯಂತೆ. ಆದ್ರೆ, ಇದು ಅಧಿಕೃತವಾಗಿಲ್ಲ. ಇದೀಗ, ಮತ್ತೊಬ್ಬ ನಟನ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಎಂಬ ಹೊಸ ಸುದ್ದಿ ವೈರಲ್ ಆಗಿದೆ. ಯಾರದು.? ಮುಂದೆ ಓದಿ..... ರಕ್ಷಿತ್ ಮತ್ತೆ ನಿರ್ದೇಶನ 'ಕಿರಿಕ್ ಪಾರ್ಟಿ' ನಂತರ ಸೈಲೆಂಟ್ ಆಗಿ ಸಿನಿಮಾ ಮಾಡ್ತಿರುವ ರಕ್ಷಿತ್ ಶೆಟ್ಟಿ ಈಗ ನಿರ್ದೇಶನಕ್ಕೆ ವಾಪಸ್ ಆಗುವ ಸುದ್ದಿ ನೀಡಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ತಯಾರಾಗಿರುವ ರಕ್ಷಿತ್ ಶೆಟ್ಟಿ 'ಪುಣ್ಯಕೋಟಿ' ಕಥೆ ಹೇಳಲು ಬರ್ತಿದ್ದಾರೆ.

ರಿಷಬ್ ಶೆಟ್ಟಿ ಖಚಿತ ಪಡಿಸಿದ್ರು ಈ ವಿಷ್ಯವನ್ನ ರಕ್ಷಿತ್ ಶೆಟ್ಟಿ ಸ್ನೇಹಿತ ಹಾಗೂ ಆಪ್ತ ರಿಷಬ್ ಶೆಟ್ಟಿ ಖಚಿತ ಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನ ಹಂಚಿಕೊಂಡಿರುವ ರಿಷಬ್ '' ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನ ಮಾಡುತ್ತಿರುವುದು ಖುಷಿ ನೀಡಿದೆ. ಉಳಿದವರು ಕಂಡಂತೆ ನಂತರ ಈಗ 'ಪುಣ್ಯಕೋಟಿ' ಕಥೆಯನ್ನ ಹೇಳುತ್ತಿದ್ದಾರೆ. ಆಲ್ ದಿ ಬೆಸ್ಟ್ ಮಗಾ'' ಎಂದು ಟ್ವೀಟ್ ಮಾಡಿದ್ದಾರೆ.

-kanasina kannadi

No comments:

Powered by Blogger.