ಗುಡ್ ನ್ಯೂಸ್ ಕೊಟ್ಟ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ
'ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೂಡು' ಎಂಬ ಮಕ್ಕಳ ಚಿತ್ರ ಮಾಡಿ ಕನ್ನಡ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ರಿಷಬ್ ಶೆಟ್ಟಿ ಈಗ ತಮ್ಮ ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಳ್ಳಲು ಸಿದ್ಧವಾಗ್ತಿದ್ದಾರೆ.ಹೌದು, ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿಗೆ ತಾಯಿ ಆಗ್ತಿದ್ದಾರೆ. ಈ ಖುಷಿಯ ವಿಚಾರವನ್ನ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
''ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಈಗ ಪೋಷಕರು. ಪ್ರೊಡಕ್ಷನ್ ನಂ 1'' ಎಂದು ಸ್ಟೇಟಸ್ ಹಾಕಿ, ಪ್ರಗತಿ ಶೆಟ್ಟಿ ಅವರು ಗರ್ಭಿಣಿ ಫೋಟೋ ಶೇರ್ ಮಾಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಸಪ್ತಪದಿ ತುಳಿದಿದ್ದರು. ಸದ್ಯ, ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ 'ಬೆಲ್ ಬಾಟಂ' ಸಿನಿಮಾ ತೆರೆಕಾಣಬೇಕಿದೆ
No comments: