ಪುನೀತ್ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ.. ಏನ್ ಸೂಪರ್ ಸಾಂಗ್ ಗುರು...
ಗಾಯಕ ಸಂಚಿತ್ ಹೆಗ್ಡೆ ಈಗ ಒಂದರ ನಂತರ ಒಂದು ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ಅವರು ಹಾಡಿ ಬಂದಿದ್ದಾರೆ. ಅವುಗಳ ಜೊತೆಗೆ ಇದೀಗ ನಟ ಪುನೀತ್ ಸಿನಿಮಾದ ಒಂದು ಹಾಡಿಗೆ ಸಂಚಿತ್ ಧ್ವನಿ ನೀಡಿದ್ದಾರೆ.
ಪವನ್ ಒಡೆಯರ್ ಎರಡನೇ ಬಾರಿ ಅಪ್ಪುಗೆ ನಿರ್ದೇಶನ ಮಾಡುತ್ತಿದ್ದಾರೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಸಿನಿಮಾದ ನಾಯಕಿಯಾರಾಗಿದ್ದಾರೆ.
ನಟ ಸಾರ್ವಭೌಮ' ಸಿನಿಮಾದ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಜೊತೆಗೆ 'ಟಗರು' ಖ್ಯಾತಿಯ ಅಂಟೋನಿ ದಾಸ್ ಸಹ ಹಾಡನ್ನು ಹಾಡಿದ್ದಾರೆ. ಡಿ ಇಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 'ನಟ ಸಾರ್ವಭೌಮ' ಚಿತ್ರದ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಅದ್ಧೂರಿ ಸೆಟ್ ಗಳ ಮೂಲಕ ದೊಡ್ಡ ಮಟ್ಟದಲ್ಲಿ ಹಾಡನ್ನು ಶೂಟಿಂಗ್ ಮಾಡುತ್ತಿದ್ದಾರೆ. ರಾಕ್ ಲೈನ್ ಚಿತ್ರದ ನಿರ್ಮಾಪಕರಾಗಿದ್ದಾರೆ.
No comments: