Header Ads

Seo Services

Dhruva Sarja: ಎದುರು ಮನೆ ಹುಡುಗಿ ಲವ್ವಲ್ಲಿ ಬಿದ್ದ ಧ್ರುವ

ಎದುರು ಮನೆ ಹುಡುಗಿ ಪ್ರೇರಣಾ ಶಂಕರ್‌ ಜತೆ ಪ್ರೇಮಗೀತೆ ಹಾಡುತ್ತಿದ್ದ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಈಗ ಎಂಗೇಜ್‌ಮೆಂಟ್‌ಗೆ ಸಿದ್ಧರಾಗಿದ್ದಾರೆ. ಬಹುಕಾಲದ ಗೆಳತಿಯ ಜತೆ ಅವರು ಹೊಸ ವರ್ಷಕ್ಕೆ ಸಪ್ತಪದಿ ತುಳಿಯಲಿದ್ದಾರೆ

         

ಶರಣು ಹುಲ್ಲೂರು 

ಚಿತ್ರರಂಗದಲ್ಲಿ ತಮ್ಮ ಸಾಧನೆಗೆ ಪ್ರೇರಣೆಯಾದ ಬಹುಕಾಲದ ಗೆಳತಿಯ ಜತೆ ಸಪ್ತಪದಿ ತುಳಿಯಲು ಸ್ಯಾಂಡಲ್‌ವುಡ್‌ ಹೀರೋ ಧ್ರುವ ಸರ್ಜಾ ನಿರ್ಧರಿಸಿದ್ದಾರೆ.ಬರೋಬ್ಬರಿ 9 ವರ್ಷಗಳಿಂದ ಎದುರು ಮನೆ ಹುಡುಗಿ ಪ್ರೇರಣಾ ಶಂಕರ್‌ ಅವರನ್ನು ಪ್ರೀತಿಸುತ್ತಿದ್ದ ಧ್ರುವ, ಇತ್ತೀಚೆಗೆ ತಮ್ಮ ಮದುವೆಯ ಸುಳಿವು ಬಿಟ್ಟುಕೊಟ್ಟಿದ್ದರು. ಈಗ ಎಂಗೇಜ್‌ಮೆಂಟ್‌ ವಿಷಯವನ್ನೂ ಹೊರಹಾಕಿದ್ದಾರೆ.ಡಿಸೆಂಬರ್‌ 9ರಂದು ಪ್ರೇರಣಾ ಮತ್ತು ಧ್ರುವ ಜೋಡಿಯ ನಿಶ್ಚಿತಾರ್ಥ ಬೆಂಗಳೂರಿನ ಬನಶಂಕರಿಯಲ್ಲಿರುವ ಲಕ್ಷೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸ್ಯಾಂಡಲ್‌ವುಡ್‌ ಸೇರಿ ತಮಿಳು, ತೆಲುಗು ಸಿನಿಮಾ ರಂಗಗಳ ಗಣ್ಯರು ಮತ್ತು ಆಪ್ತರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 


ಯಾರು ಈ ಪ್ರೇರಣಾ?. .
ಸರಿತಾ ಮತ್ತು ಶಂಕರ್‌ ಎಂಬುವವರ ಪುತ್ರಿಯಾದ ಪ್ರೇರಣಾ ಬೆಂಗಳೂರಿನ ಖಾಸಗಿ ಕಾಲೇಜ್‌ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರೇಳು ವರ್ಷ ಧ್ರುವ ಅವರ ಮನೆಯ ಮುಂದೆಯೇ ಪ್ರೇರಣಾ ಅವರ ಮನೆಯಿತ್ತು. (ಈಗ ಧ್ರುವ ಮನೆಯ ಹಿಂದಿನ ರಸ್ತೆಯಲ್ಲಿ ವಾಸವಾಗಿದ್ದಾರೆ.) ಎದುರು ಮನೆಯಲ್ಲಿದ್ದಾಗಲೇ ಧ್ರುವ ಮತ್ತು ಪ್ರೇರಣಾ ನಡುವೆ ಪ್ರೀತಿಯಾಗಿದೆ. ಅಲ್ಲದೇ, ಎರಡೂ ಕುಟುಂಬಗಳು ತುಂಬಾ ಪರಿಚಯಸ್ಥರಾಗಿದ್ದ ಕಾರಣಕ್ಕಾಗಿ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಇವರು ಮದುವೆ ಆಗುತ್ತಿದ್ದಾರೆ. 

ಧ್ರುವ ಸರ್ಜಾ ಸಿನಿಮಾ ರಂಗಕ್ಕೆ ಬರುವ ಮುನ್ನವೇ ಪ್ರೇರಣಾ ಜತೆ ಲವ್ವಲ್ಲಿ ಬಿದ್ದಿದ್ದರಂತೆ. ಮೊದಲ ಸಿನಿಮಾದಿಂದ ಈವರೆಗೂ ಧ್ರುವ ಬೆಳವಣಿಗೆಯ ಹಿಂದೆ ಪ್ರೇರಣಾ ಅವರ ಸ್ಫೂರ್ತಿ, ಪ್ರೋತ್ಸಾಹ ಇದೆ ಎಂದು ತಿಳಿದುಬಂದಿದೆ. 

ಪ್ರೇರಣಾ ಆಪ್ತರು ಹೇಳುವಂತೆ, 'ಏಳೆಂಟು ವರ್ಷಗಳಿಂದ ಇವರಿಬ್ಬರೂ ಸ್ನೇಹಿತರಾಗಿದ್ದರು. ಅವರಿಬ್ಬರ ಮಧ್ಯೆ ಗಾಢವಾದ ಗೆಳೆತನವೂ ಇತ್ತು. ಧ್ರುವ ಅವರ ಬರ್ತ್‌ಡೇ ಹಾಗೂ ಎರಡೂ ಮನೆಯವರ ಶುಭ ಸಮಾರಂಭಗಳಲ್ಲಿ ಇಬ್ಬರೂ ಒಟ್ಟಾಗಿ ಭಾಗವಹಿಸುತ್ತಿದ್ದರು. ಈಗ ಇಬ್ಬರೂ ತಮ್ಮ ಮನೆಯ ಕುಟುಂಬ ಸದಸ್ಯರಿಗೆ ಪ್ರೇಮದ ವಿಚಾರ ತಿಳಿಸಿದ್ದಾರೆ. ಎಲ್ಲರ ಒಪ್ಪಿಗೆ ಪಡೆದುಕೊಂಡೇ ಮದುವೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಹೇಳುತ್ತಾರೆ. 

ಸೂಪರ್‌ ಹಿಟ್‌ ಆಗಿರುವ ಅದ್ಧೂರಿ, ಬಹದ್ದೂರ್‌, ಭರ್ಜರಿ ಸಿನಿಮಾಗಳಲ್ಲಿ ನಟಿಸಿರುವ ಧ್ರುವ, ಮದುವೆ ವಿಚಾರ ಬಂದಾಗ ಮೌನ ವಹಿಸುತ್ತಿದ್ದರು. ತಾವು ಮದುವೆಯಾದರೆ ಪ್ರೇಮ ವಿವಾಹವನ್ನೇ ಆಗುತ್ತೇನೆ ಎಂದು ಕಡ್ಡಿ ತುಂಡಾದಂತೆ ಹೇಳುತ್ತಿದ್ದರು. ಈಗ ಅದನ್ನೇ ನಿಜವಾಗಿಸಿದ್ದಾರೆ. 

ಡಿ.9 ರಂದು ಈ ಜೋಡಿಯು ನಿಶ್ಚಿತಾರ್ಥ ಮಾಡಿಕೊಂಡರೆ, ಹೊಸ ವರ್ಷಕ್ಕೆ ಮದುವೆಯಾಗಲಿದೆಯಂತೆ. ಮದುವೆ ದಿನಾಂಕವನ್ನು ಎಂಗೇಜ್‌ಮೆಂಟ್‌ ದಿನವೇ ನಿಗದಿ ಮಾಡುತ್ತಾರಂತೆ ಸರ್ಜಾ ಕುಟುಂಬ

No comments:

Powered by Blogger.