Header Ads

Seo Services

ಹಾಲಿವುಡ್ ಸಿನಿಮಾ 'ರೈಸನ್'ನಲ್ಲಿ ಸುದೀಪ್ ಕಂಗೊಳಿಸುವುದು ಹೀಗೆ..!

ಇಷ್ಟು ದಿನ ಕಿಚ್ಚ ಸುದೀಪ್ ಅವರ ಸ್ಯಾಂಡಲ್ ವುಡ್ ಸುದ್ದಿಗಳ ಬಗ್ಗೆ ಕೇಳ್ತಿದ್ವಿ ಇದೀಗ ಅವರ ಹಾಲಿವುಡ್ ಸಿನಿಮಾದ ಸಮಾಚಾರ ಕೇಳುವ ಸಮಯ ಬಂದಿದೆ.
ಸುದೀಪ್ ಅವರ ಹಾಲಿವುಡ್ ಚಿತ್ರ 'ರೈಸನ್' ಸಿನಿಮಾದ ಮತ್ತೊಂದು ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಹಳೆ ಪೋಸ್ಟರ್ ಗಿಂತ ಇಲ್ಲಿ ಕಿಚ್ಚ ಕಲರ್ ಫುಲ್ ಆಗಿ ಕಂಗೊಳಿಸಿದ್ದಾರೆ. ಚಿತ್ರದ ಫೋಟೋ ಶೂಟ್ ಬಳಿಕ ಈಗ ಸಾಮಾಜಿಕ ಜಾಲತಾಣದಲ್ಲಿ 'ರೈಸನ್' ಪೋಸ್ಟರ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ ಕಮಾಂಡೋ ಪಾತ್ರವನ್ನು ಸುದೀಪ್ ಮಾಡುತ್ತಿದ್ದು, ಅಮೇರಿಕಾ ಫ್ಲಾಗ್ ಇರುವ ಕಮಾಂಡೋ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಕೃಷ್ಣ ಕಾರ್ತಿಕ್ ಅನ್ನೋ ಫೋಟೋಗ್ರಾಫರ್, ಹ್ಯಾರಿ ಮಾಸ್ಟರ್ ಫ್ರೇಮ್ ಸ್ಟುಡಿಯೋದಲ್ಲಿ ಫೋಟೋ ಶೂಟ್ ಮಾಡಿದ್ದು ಚಿತ್ರದ ಪೋಸ್ಟರ್ ನಲ್ಲಿ ಅಭಿನಯ ಚಕ್ರವರ್ತಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸ್ತಾರೆ. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ.........

No comments:

Powered by Blogger.