Home
Unlabelled
ಜನವರಿಗೆ ಸೆಟ್ಟೇರಲಿದೆ ಡಿ ಬಾಸ್ ದರ್ಶನ್ರ 'ಮದಕರಿ' ಸಿನಿಮಾ..!

'ಮದಕರಿ' ಚಂದನವನದ ಪ್ರತಿಷ್ಟಿತ ಸಿನಿಮಾ. ಶುರುವಾಗುವ ಮುನ್ನವೇ ಭೂಮಿ ಭಾನು ಒಂದಾಗುವಷ್ಟು ಸದ್ದು ಮಾಡುತ್ತಿರುವ ಸಿನಿಮಾ. ಕನ್ನಡದ 'ಬಾಹುಬಲಿ' ಆಗುತ್ತೆ ಎಂದು ಹೇಳಲಾಗುತ್ತಿರುವ ಸಿನಿಮಾ. ಇಂತಹ ಈ ಸಿನಿಮಾದ ಬಗ್ಗೆ ಏನೇ ಮಾಹಿತಿ ಇದ್ದರೂ ಚಿತ್ರರ
ಸಿಕರ ಕಣ್ಣು, ಕಿವಿ ತೆರೆದುಕೊಂಡೇ ಇರುತ್ತೆ. ಈಗ ಅಂತಹುದೇ ಒಂದಷ್ಟು ಮಾಹಿತಿ ಈಗ ಹೊರ ಬಿದ್ದಿದೆ.
ಗಂಡುಗಲಿ ಮದಕರಿ ನಾಯಕ, ದುರ್ಗದ ನಾಯಕನ ಗತ್ತು ಗೈರತ್ತನ್ನ ಸಿನಿಮಾ ರೂಪದಲ್ಲಿ ತೋರಿಸಲಾಗುತ್ತಿರುವ ಚಿತ್ರವೇ 'ಮದಕರಿ'. ಅಪ್ರತಿಮ ಹೋರಾಟಗಾರ, ಕೆಚ್ಚೆದೆಯ ಕಲಿ, ದುರ್ಗದ ಹುಲಿಯನ್ನ ಬೆಳ್ಳಿತೆರೆ ಮೇಲೆ ವಿಜೃಂಭಿಸಲು ಹೊರಟಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರದ ಮೇಲೆ ಭೂಮಿ-ಬಾನು ಒಂದಾಗುವಷ್ಟು ನಿರೀಕ್ಷೆ ಹುಟ್ಟಲು ಮೂಲ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಹೌದು, ಅಭಿಮಾನಿಗಳ ಪ್ರೀತಿಯ ಡಿ-ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಗೊಳ್ಳಿ ರಾಯಣ್ಣ ನಂತರ ಮತ್ತೊಮ್ಮೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದುರ್ಗದ ಕಲ್ಲಿನ ಕೋಟೆ ಮೇಲೆ ನಿಂತು ಮೀಸೆ ತಿರುವಲಿದ್ದಾರೆ. ಇದಿಷ್ಟು ವಿಷಯವನ್ನೇ ಕೇಳಿ ದರ್ಶನ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಈ ಸಿನಿಮಾದ ಏನೇ ವಿಷಯ ಇರಲಿ ಕಣ್ಣರಳಿಸಿ ನೋಡುತ್ತಾರೆ. ಮದಕರಿ ಅನ್ನೋ ಹೆಸರು ಕಿವಿಗೆ ಬಿದ್ದರೆ ಸಾಕು, ದರ್ಶನ್ ಅಭಿಮಾನಿಗಳ ಕಿವಿ ಅಗಲವಾಗುತ್ತೆ. ಈಗ ಅಂತಹುದೇ ಇನ್ನಷ್ಟು ಹೊಸ ಮಾಹಿತಿ ಚಿತ್ರ ತಂಡದಿಂದ ಸಿಕ್ಕಿದೆ.
'ಮದಕರಿ' ಸಿನಿಮಾ ಸೆಟ್ಟೇರೋಕೆ ಎಲ್ಲ ತಯಾರಿಗಳು ಬಿರುಸಿನಿಂದ ನಡೆದಿವೆ. ಇದಕ್ಕಾಗಿ ನಿರ್ದೇಶಕ ರಾಜೇಂದ್ರ ಸಿಂಗ್‍ಬಾಬು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಯಾಕೆಂದರೆ ಮದಕರಿ ಸಿನಿಮಾವನ್ನ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಪರಭಾಷಿಗರು ಕೂಡ ತಿರುಗಿ ನೋಡುವಂತೆ ಮಾಡಲು ಇಡೀ ತಂಡ ಪಣ ತೊಟ್ಟಿದೆ. ಇದಕ್ಕಾಗಿಯೇ ಪೇಪರ್ ವರ್ಕ್‍ನಲ್ಲಿಯೇ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್‍ಬಾಬು ಮತ್ತು ಟೀಮ್.
ಕಳೆದ ಎರಡು ವಾರಗಳಿಂದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ದುರ್ಗದಲ್ಲಿ ಮನೆ ಮಾಡಿದ್ದಾರೆ. ಕಾದಂಬರಿಕಾರ ಬಿ.ಎಲ್ ವೇಣು ಜೊತೆಗೂಡಿ ದುರ್ಗದ ಪ್ರತಿ ಗಲ್ಲಿ ಗಲ್ಲಿಗಳನ್ನೂ ಸುತ್ತುತ್ತಿದ್ದಾರೆ. ಕಥೆ ನಡೆದ ಅಷ್ಟು ಜಾಗಗಳಿಗೆ ಭೇಟಿ ಕೊಡುತ್ತಾ, ವಿಷಯಗಳನ್ನ ಒಂದು ಬಿಡದಂತೆ ಕಲೆ ಹಾಕುತ್ತಿದ್ದಾರಂತೆ. ಇದಕ್ಕಾಗಿ ಇತಿಹಾಸ ತಜ್ಞರನ್ನ ಸಹಾಯ ಸಹ ತೆಗೆದುಕೊಳ್ಳಲಾಗುತ್ತಿದೆಯಂತೆ.
ಇನ್ನು 'ಮದಕರಿ' ಸಿನಿಮಾದ ಮಹೂರ್ತ ಜನವರಿ 15ಕ್ಕೆ ನಡೆಯೋದು ಪಕ್ಕಾ ಆಗಿದೆ. 'ಮದಕರಿ' ಅವತಾರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಬೇರೆ ಯಾವ ವಿಷಯಗಳೂ ಇನ್ನೂ ತಿಳಿದು ಬಂದಿಲ್ಲ. ಮೊದಲು ಚಿತ್ರಕತೆ ಪಕ್ಕಾ ಆಗಿ ಬಿಡಲಿ, ಆ ನಂತರ ಉಳಿದ ಕೆಲಸ ಅಂತಿದ್ದಾರೆ ನಿರ್ದೇಶಕರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷಯಕ್ಕೆ ಬಂದರೆ, ದರ್ಶನ್‍ಗೆ ಐತಿಹಾಸಿಕ-ಪೌರಾಣಿಕ ಪಾತ್ರಗಳು ಹೊಸದೇನಲ್ಲ. ಅವರು ಈಗಾಗಲೇ ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ'ನ ಪಾತ್ರದಲ್ಲಿ ತೆರೆ ಮೇಲೆ ವಿಜೃಂಭಿಸಿದ್ದಾರೆ. ರಾಯಣ್ಣ ಅಂದ ತಕ್ಷಣ ದರ್ಶನ್ ನೆನಪಾಗುವಷ್ಟು ಮಟ್ಟಿಗೆ ತಮ್ಮ ಅದ್ಭುತ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ. ಇನ್ನು ಅವರ ನಟನೆಯಲ್ಲಿ 'ಕುರುಕ್ಷೇತ್ರ' ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಪೌರಾಣಿಕ ಚಿತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್..
ಮದಕರಿ ನಾಯಕನ ಪಾತ್ರ ನಿಜಕ್ಕೂ ದರ್ಶನ್ ಪಾಲಿಗೆ ಸವಾಲಿನ ಪಾತ್ರವೇ ಸರಿ. ಇಲ್ಲಿ ಸಾಕಷ್ಟು ಪೌರುಷ, ವೀರಾವೇಷವನ್ನು ಅವರು ತೋರಲೇಬೇಕು. ಕತ್ತಿ ವರಸೆ, ಕುದುರೆ ಸವಾರಿ ಸೇರಿದಂತೆ ನಾನಾ ರೀತಿಯ ಸಾಹಸ ಕಲೆಯನ್ನ ಮದಕರಿ ನಾಯಕನಾಗಿ ಅವರು ಪ್ರದರ್ಶಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ 'ಮದಕರಿ'ಯ ಅವತಾರಕ್ಕಾಗಿ ದರ್ಶನ್ ಸಂಪೂರ್ಣ ದೇಹವನ್ನು ಟೋನ್ ಮಾಡಿಕೊಳ್ಳಬೇಕಿದೆ. ಆದರೆ ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದ ದರ್ಶನ್ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಇನ್ನೂ ಅವರ ಕೈ ನೋವು ವಾಸಿಯಾಗಿಲ್ಲ. ಹೀಗಾಗಿ 'ಮದಕರಿ'ಗಾಗಿ ವರ್ಕೌಟ್ ಮಾಡಲು ಇನ್ನೂ ಶುರು ಮಾಡಿಲ್ಲ ಚಾಲೆಂಜಿಂಗ್ ಸ್ಟಾರ್.
-ಕನಸಿನ ಕನ್ನಡಿ

Reviewed by kanasina kannadi
on
November 20, 2018
Rating: 5
No comments: