Header Ads

Seo Services

‘ಸೂಪರ್ ಸ್ಟಾರ್’ ರಜನಿಕಾಂತ್ ಎದುರು ತೊಡೆತಟ್ಟಿ ನಿಂತ ಕನ್ನಡದ ಹುಡುಗ; ಭೈರವ ಗೀತ-2.0 ಚಿತ್ರಗಳು ಒಂದೇ ಬಾರಿಗೆ ಬಿಡುಗಡೆ...

ಎಲ್ಲ ಅಂದುಕೊಂಡಂತೆ ನಡೆದಿದ್ದರೆ ರಾಮ್​ ಗೋಪಾಲ್​ ವರ್ಮಾ ನಿರ್ಮಾಣದ ‘ಭೈರವ ಗೀತ’ ನ.22ರಂದು ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ನ.30ಕ್ಕೆ ರಿಲೀಸ್​ ಆಗುತ್ತಿದೆ. ಇತ್ತ, ನ.29ರಂದು ‘2.0’ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಚಿತ್ರಗಳು ಬಾಕ್ಸ್​​ ಆಫೀಸ್​ನಲ್ಲಿ ಮುಖಾಮುಖಿ ಆಗುತ್ತಿವೆ.

‘ಟಗರು’ ಚಿತ್ರದ ಮೂಲಕ ‘ಡಾಲಿ’ ಎಂದೇ ಖ್ಯಾತರಾದ ಧನಂಜಯ್​ ‘ಭೈರವ ಗೀತ’ ಚಿತ್ರದ ಮೂಲಕ ಟಾಲಿವುಡ್, ಕಾಲಿವುಡ್, ಮಾಲಿವುಡ್​ಗೆ ಒಂದೇ ಬಾರಿಗೆ ಕಾಲಿಡುತ್ತಿದ್ದಾರೆ. ಅಚ್ಚರಿ ಎಂದರೆ ‘ಸೂಪರ್​ ಸ್ಟಾರ್​’ ರಜನಿಕಾಂತ್​ ವಿರುದ್ಧವೇ ಧನಂಜಯ್​ ತೊಡೆತಟ್ಟಿ ನಿಂತಿದ್ದಾರೆ. ಅಂದರೆ, ‘ಭೈರವ ಗೀತ’ ಹಾಗೂ ರಜನಿ ಅಭಿನಯದ ‘2.0’ ಒಂದೇ ಬಾರಿಗೆ ತೆರೆಕಾಣುತ್ತಿದೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ ರಾಮ್​ ಗೋಪಾಲ್​ ವರ್ಮಾ ನಿರ್ಮಾಣದ ‘ಭೈರವ ಗೀತ’ ನ.22ರಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ನ.30ಕ್ಕೆ ರಿಲೀಸ್​ ಆಗುತ್ತಿದೆ. ಇತ್ತ, ನ.29ರಂದು ‘2.0’ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಚಿತ್ರಗಳು ಬಾಕ್ಸ್​​ ಆಫೀಸ್​ನಲ್ಲಿ ಮುಖಾಮುಖಿ ಆಗುತ್ತಿವೆ.
2010ರಲ್ಲಿ ತೆರೆಕಂಡ ‘ಎಂದಿರನ್​’ ಚಿತ್ರದ ಮುಂದಿನ ಭಾಗವಾಗಿ ‘2.0’ ತೆರೆಗೆ ಬರುತ್ತಿದೆ. ರಜನಿಕಾಂತ್​, ಅಕ್ಷಯ್​ ಕುಮಾರ್​, ಆ್ಯಮಿ ಜಾಕ್ಸನ್​ ಸೇರಿ ಅನೇಕ ಪ್ರಮುಖರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಟೀಸರ್​ ಹಾಗೂ ಟ್ರೇಲರ್ ನೋಡಿದವರು ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. -ಕನಸಿನ ಕನ್ನಡಿ 
ಇನ್ನು, ‘ಭೈರವ ಗೀತ’ ಚಿತ್ರಕ್ಕೆ ನವ ನಿರ್ದೇಶಕ ಸಿದ್ಧಾರ್ಥ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಚಿತ್ರದಲ್ಲಿ ಮೇಲು-ಕೀಳುಗಳ ನಡುವೆ ನಡೆವ ಘರ್ಷಣೆ ಬಗ್ಗೆ ಹೇಳುತ್ತಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಈಗ ಈ ಎರಡೂ ಚಿತ್ರಗಳು ಒಂದೇ ಬಾರಿಗೆ ತೆರಕಾಣುತ್ತಿರುವುದು ಕುತೂಹಲ ಮೂಡಿಸಿದೆ.

No comments:

Powered by Blogger.