ಭರ್ಜರಿ ಹುಡುಗನ ಅದ್ದೂರಿ ಕಲ್ಯಾಣ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈ ಹಿಡಿಯುವ ಬೆಡಗಿ ಯಾರು ಗೊತ್ತಾ..? ಅಂತು ಇಂತು ಲವ್ ಆಯ್ತು.... ಅಧಿಕೃತ ಮಾಹಿತಿ...
ಆ್ಯಕ್ಷನ್ ಪ್ರಿನ್ಸ್ ಧ್ರುವ ಮುಚ್ಚಿಟ್ಟ ಗುಟ್ಟು ಈಗ ರಟ್ಟಾಗಿದೆ. ಭರ್ಜರಿ ಹುಡುಗನ ಜೊತೆ ರಿಯಲ್ ಲೈಫ್‍ನಲ್ಲಿ ಡ್ಯುಯೆಟ್ ಹಾಡುವ ಹುಡುಗಿ ಯಾರು ಅನ್ನೋ ರಹಸ್ಯ ಬಯಲಾಗಿದೆ. ಹಾಗಾದರೆ ಬನ್ನಿ ಬಹದ್ಧೂರ್ ಧ್ರುವ ಮದುವೆ ಯಾವಾಗ ? ಅಚ್ಚುವಿಗೆ ಮೆಚ್ಚುಗೆಯಾಗಿರೋ ಪ್ರೇರಣಾ ಯಾವಾಗಿನಿಂದ ಪರಿಚಯ, ಇವರಿಬ್ಬರ ಪ್ರೇಮ್ ಕಹಾನಿಗೆ ಎಷ್ಟು ವರ್ಷ ಆ ಕುರಿತ ಒಂದು ವರದಿ ಇಲ್ಲಿದೆ ಓದಿ.
ಧ್ರುವ ಸರ್ಜಾ ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್. ಒಂದರ ಹಿಂದೆ ಒಂದರಂತೆ ಮೂರು ಹಿಟ್‍ಗಳನ್ನ ಕೊಟ್ಟು ಹ್ಯಾಟ್ರಿಕ್ ಹೀರೋ ಎಂದೇ ಕರೆಸಿಕೊಳ್ಳುತ್ತಿರುವ ನಟ. ಧ್ರುವ ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯಾಚುಲರ್ ಪಟ್ಟಿಯಲ್ಲಿ ಟಾಪ್‍ನಲ್ಲಿದ್ದಾರೆ. ಕಳೆದ ತಿಂಗಳಷ್ಟೇ 30 ವರ್ಷ ಪೂರೈಸಿ, 31ಕ್ಕೆ ಕಾಲಿಟ್ಟಿರೋ ನಟ. ಇಂತಹ ಧ್ರುವ ಯಾವಾಗ ಮದುವೆಯಾಗ್ತಾರೆ..? ಸದ್ಯ ಯಾರನ್ನಾದರೂ
ಪ್ರೀತಿಸುತ್ತಿದ್ದಾರಾ ಅನ್ನೋ ಕುತೂಹಲ ಚಿತ್ರ ಪ್ರೇಮಿಗಳು ಹಾಗೂ ಮಾಧ್ಯಮದವರಿತ್ತು.
ಸಾಮಾನ್ಯವಾಗಿ ಯಾರಾದರೂ ಸೆಲೆಬ್ರಿಟಿಗಳಿಗೆ ಮದುವೆ ಯಾವಾಗ ಅನ್ನೋ ಪ್ರಶ್ನೆ ಎದುರಾದಾಗ, ಅವರು ಜಾರಿಕೊಳ್ಳುತ್ತಾರೆ. ಸೆಟ್ ಆದಾಗ ನಾವೇ ಹೇಳುತ್ತೇವೆ ಅಂತಾರೆ. ಆದರೆ ಧ್ರುವ ಮದುವೆಯ ಮಾತು ಬಂದಾಗ, 30 ಆಗಿದೆ, 31 ಆಗುವಷ್ಟರಲ್ಲಿ ಮೀಟ್ರು ಮ್ಯಾಲೆ ಮ್ಯಾಟ್ರು ಕೂರಿಸ್ತೇನೆ ಅಂತ ಫಿಲ್ಮಿ ಸ್ಟೈಲ್‍ನಲ್ಲಿಯೇ ಡೈಲಾಗ್ ಹೊಡೆದಿದ್ದರು.
ಸದ್ಯ ಧ್ರುವ ಬಗೆಗಿನ ಖಾಸಗಿ ಗುಟ್ಟು ರಟ್ಟಾಗಿದೆ. ಧ್ರುವ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದ ವಿಷಯ ಬಯಾಲಾಗಿದೆ. ಅಚ್ಚುವಿನ ಮೆಚ್ಚಿನ ಹುಡುಗಿ ಯಾರು ಅನ್ನೋ ವಿಷಯ ಟಾಕ್ ಆಫ್ ದಿ ಟೌನ್ ಆಗಿದೆ. ಧ್ರುವ ಹೃದಯಕ್ಕೆ ಪ್ರೇರಣೆಯಾದ ಹುಡುಗಿ ಪ್ರೇರಣಾ.
ಅಷ್ಟಕ್ಕೂ ಧ್ರುವ ಹಾಗೂ ಪ್ರೇರಣಾ ಅವರದ್ದು ನಿನ್ನೆ ಮೊನ್ನೆಯ ಪ್ರೇಮವಲ್ಲ. ಅಕ್ಕ ಪಕ್ಕದ ಮನೆಯವರಾಗಿದ್ದ ಇವರಿಬ್ಬರು ಬಾಲ್ಯ ಸ್ನೇಹಿತರು. ಇಬ್ಬರೂ ಜೊತೆಗೆ ಬೆಳೆದವರು. ಜೊತೆಗೆ ಶಾಲೆಗೆ ಹೋದವರು, ಆಟ-ಪಾಠ ಎಲ್ಲದರಲ್ಲೂ ಜೊತೆ ಜೊತೆಗೆ ಇದ್ದವರು.
ಅಂದಹಾಗೆ ಧ್ರುವ 16 ವರ್ಷಗಳಾಗಿರುವಾಗಲೇ ಪ್ರೇರಣಾ ಮೇಲೆ ಪ್ರೀತಿ ಹುಟ್ಟಿತ್ತಂತೆ. ಅಲ್ಲಿಗೆ ಧ್ರುವಗೆ ಪ್ರೀತಿಯಾಗಿ ಸಹ 14 ವರ್ಷವಾಗಿದೆಯಂತೆ.
'ಅದ್ಧೂರಿ' ಮೂಲಕ ಚಂದನವನಕ್ಕೆ ಕಾಲಿಟ್ಟ ಧ್ರುವ, ಎಂಟ್ರಿಯಲ್ಲಿಯೇ ಸೆಂಚುರಿ ಹೊಡೆದವರು. ಆ ನಂತರ 'ಬಹದ್ಧೂರ್' ಹಿಟ್ ಕೊಟ್ಟು, 'ಭರ್ಜರಿಯಾಗಿ' ಬಾಕ್ಸಾಫೀಸ್‍ನಲ್ಲಿ ಘರ್ಜಿಸಿ ಸ್ಟಾರ್ ಆಗಿ ಹೊರಹೊಮ್ಮಿದರು. ಆದರೆ ಸ್ಟಾರ್ ಪಟ್ಟಕ್ಕೇರಿದ ಮೇಲೂ ತಮ್ಮ ಪ್ರೇಮವನ್ನ ಮರೆಯಲಿಲ್ಲ.ಇನ್ನು ಪ್ರೇರಣಾ ಸಹ, ಅದ್ಧೂರಿ ಹುಡುಗನ ಯಶಸ್ಸಿನಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಿದ್ದರಂತೆ. ಯಾವುದೇ ವಿಷಯ ಇರಲಿ ಇಬ್ಬರು ಚರ್ಚೆ ಮಾಡುತ್ತಿದ್ದರಂತೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಧ್ರುವ ಸರ್ಜಾಗೆ ಬೆಂಬಲ ನೀಡುತ್ತಾರಂತೆ ಪ್ರೇರಣಾ. ಅಷ್ಟೇಅಲ್ಲ ಧ್ರುವ ಅಭಿನಯದ ಸಿನಿಮಾ ಪೋಸ್ಟರ್ಗಳನ್ನು ಶೇರ್ ಮಾಡುತ್ತಾರಂತೆ.
ಅಂದಹಾಗೆ ಇವರಿಬ್ಬರು ಸದ್ಯ ಇಬ್ಬರ ಕುಟುಂಬದವರನ್ನೂ ಒಪ್ಪಿಸಿದ್ದಾರೆ. ತಮ್ಮ ಪ್ರೇಮಕ್ಕೆ, ಮದುವೆಯ ರೂಪ ಕೊಡಲು ನಿರ್ಧರಿಸಿದ್ದಾರೆ. ಅದರಂತೆ ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ನವಂಬರ್ 9 ರಂದು ಬೆಂಗಳೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಂಗುರ ಬದಲಿಸಿಕೊಳ್ಳಲಿದ್ದಾರೆ. ಈ ಮೂಲಕ ನನಗೆ ನೀನು, ನಿನಗೆ ನಾನು ಅಂತ ಎಂಬ ಅಧಿಕೃ
No comments: